ಅಭಿಪ್ರಾಯ / ಸಲಹೆಗಳು

ಕರ್ನಾಟಕ ಕಾನೂನು ಆಯೋಗದ ಕ್ರಿಯಾತ್ಮಕ ವಿಧಾನ

ಸಲಹೆ, ಸೂಚನೆ ಹಾಗೂ ಸ್ವಪ್ರೇರಿತ ಆಯೋಗದ ಕಾರ್ಯಗಳು.

  • ಕರ್ನಾಟಕ ಸರ್ಕಾರದಿಂದ ಅಥವಾ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಅಥವಾ ಗುರುತಿಸಲ್ಪಟ್ಟ ಸರ್ಕಾರೇತರ ಸಂಸ್ಥೆಗಳಿಂದ ಬಂದಂತಹ ವಿಷಯಗಳನ್ನು ಆಧರಿಸಿ ವರದಿಗಳನ್ನು ನೀಡಲಾಗುತ್ತದೆ. ಸರ್ಕಾರಿ ಆದೇಶ ಸಂಖ್ಯೆ ಲಾ 42 ಹೆಚ್‍ಆರ್‍ಸಿ 2008, ಬೆಂಗಳೂರು ದಿನಾಂಕ 12.01.2009 ರಲ್ಲಿ ನಮೂದಿಸಿರುವ ವಿಷಯಗಳನ್ನು ಆಧರಿಸಿ ಆಯೋಗವು ಸ್ವಪ್ರೇರಿತವಾಗಿ ಕಾರ್ಯ ನಿರ್ವಹಿಸುತ್ತದೆ.
  • ಪ್ಯಾರ ಒಂದರ ವಿಷಯಗಳನ್ನು ಸದಸ್ಯ ಕಾರ್ಯದರ್ಶಿಗಳು, ಗೌರವಾನ್ವಿತ ಅಧ್ಯಕ್ಷರ ಮುಂದೆ ಮಂಡಿಸಿ ಸೂಕ್ತ ಆದೇಶಗಳನ್ನು ಪಡೆದುಕೊಳ್ಳತಕ್ಕದ್ದು. ಅಧ್ಯಕ್ಷರ ಸಲಹೆ/ಸೂಚನೆ ಪ್ರಕಾರ ಗೌರವಾನ್ವಿತ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರು ಪ್ರಾರಂಭಿಕ ಕ್ರಿಯೆಗಳನ್ನು ನಿರ್ವಹಿಸುವುದು.
     
  • ಗೌರವಾನ್ವಿತ ಸದಸ್ಯರು/ಸದಸ್ಯ ಕಾರ್ಯದರ್ಶಿಯವರು ತಯಾರು ಮಾಡಿದ ಟಿಪ್ಪಣಿಯನ್ನು ಗೌರವಾನ್ವಿತ ಅಧ್ಯಕ್ಷರ ಮುಂದೆ ಚರ್ಚೆಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಮಂಡಿಸುವುದು. ಕರಡು ಸೂಚನೆಗಳನ್ನು ಆಯೋಗದ ಮುಂದೆ ಮಂಡಿಸಿ, ವಿಷಯಾಧರಿಸಿ ಆಯೋಗವು ಸಮಸ್ಯೆಗಳ ವಿಶ್ಲೇಷಣೆ ಮಾಡಲು ಅವಶ್ಯಕತೆಯುಳ್ಳ ಮಾಹಿತಿಯನ್ನು ಪರಿಶೀಲಿಸಲು ಹಾಗೂ ಸೂಕ್ತ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ವ್ಯಕ್ತಿಗಳನ್ನು ಅಥವಾ ಸಂಸ್ಥೆಯನ್ನು ಸಂಪರ್ಕಿಸಿ ಅವರ ಜೊತೆ ಚರ್ಚಿಸಲಾಗುವುದು.
     
  • ಆಯೋಗವು ಸಂಶೋಧನ ತಜ್ಞರಿಗೆ ವಿಷಯವನ್ನು ಕಳುಹಿಸಿ ಆ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಕ್ರೂಢೀಕರಿಸಲು ಕಳುಹಿಸಬಹುದು.
     
  • ಸಂಪೂರ್ಣ ಮಾಹಿತಿ ಹಾಗೂ ತತ್ರಾಂಶಗಳನ್ನು ಪಡೆದುಕೊಂಡ ನಂತರ ಆಯೋಗವು ಆ ವಿಷಯದಲ್ಲಿ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಬೇಕು. ಆಯೋಗವು ವಿಷಯಾಧರಿಸಿ ವರದಿ ತಯಾರು ಮಾಡಿದ ನಂತರ ಪೂರ್ಣ ಆಯೋಗದ ಮುಂದೆ ಪರಿಶೀಲನೆ ಹಾಗೂ ಸೂಕ್ತ ಕಾರ್ಯಕ್ಕೆ ಮಂಡಿಸತಕ್ಕದ್ದು. ಪೂರ್ಣ ಆಯೋಗದ ಮುಂದೆ ವರದಿಯನ್ನು ಚರ್ಚೆಗೆ ಒಳಪಡಿಸಿ, ಅವಶ್ಯಕತೆಯಿದಲ್ಲಿ ವರದಿಗೆ ತಿದ್ದುಪಡಿಯನ್ನು ತಂದು ಸರ್ಕಾರದ ಸೂಕ್ತ ಕ್ರಮಕ್ಕಾಗಿ ಅಂತಿಮ ವರದಿಯನ್ನು ಸಿದ್ಧಪಡಿಸುವುದು.
     
  • ಆಯೋಗವು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಗಳಿಂದ ಸಲಹೆ/ಸೂಚನೆಗಳನ್ನು ಪರಿಶೀಲನೆಗೆ ಸ್ವಾಗತಿಸುತ್ತದೆ. ಅಂತಹ ಸಲಹೆ/ಸೂಚನೆಗಳನ್ನು ಸದಸ್ಯ ಕಾರ್ಯದರ್ಶಿ, ಕರ್ನಾಟಕ ಕಾನೂನು ಆಯೋಗ, ರೂಂ.ನಂ.302 ಹಾಗೂ 308, 3ನೇ ಮಹಡಿ, ವಿಧಾನಸೌಧ, ಬೆಂಗಳೂರು-560 001 ಗೆ ಕಳುಹಿಸಬಹುದು.

ಇತ್ತೀಚಿನ ನವೀಕರಣ​ : 23-06-2021 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾನೂನು ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080