ಅಭಿಪ್ರಾಯ / ಸಲಹೆಗಳು

ಹಾಲಿ ಸದಸ್ಯ ಕಾರ್ಯದರ್ಶಿಗಳು

 

ಶ್ರೀ ಆರ್. ಬಿ. ಧರ್ಮಗೌಡರ

(ವಿಶ್ರಾಂತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು)

ಸದಸ್ಯ ಕಾರ್ಯದರ್ಶಿ,

ಕರ್ನಾಟಕ ಕಾನೂನು ಆಯೋಗ

1

ಜನ್ಮ ದಿನಾಂಕ ಮತ್ತು ಸ್ಥಳ

31.05.1958, ಪಡೇಸೂರು, ನವಲಗುಂದ ತಾಲ್ಲೂಕು, ಧಾರವಾಡ ಜಿಲ್ಲೆ.

2

ಪೋಷಕರು

ದಿವಂಗತ ಶ್ರೀಮತಿ ಈರಮ್ಮ ಮತ್ತು ದಿವಂಗತ ಶ್ರೀ ಬಸನಗೌಡ

3

ವಿದ್ಯಾಭ್ಯಾಸ

ಬಿ.ಎಸ್‌ಸಿ., ಎಲ್.ಎಲ್.ಬಿ (ವಿಶೇಷ)

4

ಕಾನೂನು ವೃತ್ತಿ

 1. ಕರ್ನಾಟಕ ವಕೀಲರ ಪರಿಷತ್‌ನಲ್ಲಿ ನ್ಯಾಯವಾದಿಯಾಗಿ ನೊಂದಾಯಿಸಿಕೊಂಡು, ಹಿರಿಯ ನ್ಯಾಯವಾದಿ ಶ್ರೀ ಜಿ.ಆರ್.ಅಂದಾನಿಮಠ ಇವರ ಕಛೇರಿಯಲ್ಲಿ ಸೇರಿಕೊಂಡು, ಅವರ ಮಾರ್ಗದರ್ಶನದಲ್ಲಿ 1983 ರಿಂದ 1989 ರವರೆಗೆ ಹುಬ್ಬಳ್ಳಿ ನ್ಯಾಯಾಲಯಗಳಲ್ಲಿ ಆರು ವರ್ಷಗಳ ಕಾಲ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದರು.
 2. ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು 04.08.1989 ರಿಂದ ಅಕ್ಟೋಬರ್‌ 1993 ರವರೆಗೆ ಹುಮನಬಾದ ಮತ್ತು ಇಂಡಿ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದರು.

4

ನ್ಯಾಯಾಂಗ ಸೇವೆ

 1. ಅಕ್ಟೋಬರ್‌ 1993 ರಲ್ಲಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಾಗಿ ಕರ್ನಾಟಕ ನ್ಯಾಯಾಂಗ ಸೇವೆ ಸೇರಿದರು.
 2. ಮೇ 2003 ರಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ಪದೋನ್ನತಿ ಪಡೆದು, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾಗಿ ರಾಣೇಬೆನ್ನೂರಿನಲ್ಲಿ ಸೇವೆ ಸಲ್ಲಿಸಿದರು.
 3. ಜೂನ್‌ 2009 ರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಪದೋನ್ನತಿ ಪಡೆದು ಕೌಟುಂಬಿಕ ನ್ಯಾಯಾಲಯ ಗುಲ್ಬರ್ಗಾ, ಕಾರ್ಮಿಕ ನ್ಯಾಯಾಲಯ ಬಿಜಾಪುರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಬಿಜಾಪುರ್‌ನಲ್ಲಿ, ಸೇವೆ ಸಲ್ಲಿಸಿದರು.
 4. ನವೆಂಬರ್‌ 2013 ರಿಂದ ಮೇ 2015 ರವರೆಗೆ ಹೆಚ್ಚುವರಿ ಮಹಾ ನಿಬಂಧಕರಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಗುಲ್ಬರ್ಗಾ ಪೀಠದಲ್ಲಿ ಸೇವೆ ಸಲ್ಲಿಸಿದರು.
 5. ಮೇ 2015 ರಿಂದ ಮೇ 2016 ರವರೆಗೆ ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು.
 6. ಮೇ 2016 ರಿಂದ ಫೆಬ್ರವರಿ 2017 ರವರೆಗೆ ಸಿಬಿಐ ನ್ಯಾಯಾಲಯ ಬೆಂಗಳೂರಿನಲ್ಲಿ ಪ್ರಧಾನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು.
 7. ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ, ಮಾರ್ಚ್‌ 2017 ರಿಂದ 31 ಮೇ 2018 ರವರೆಗೆ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದರು.

5

ನಿರ್ವಹಿಸಿದ ಹುದ್ದೆಗಳ ವಿವರಗಳು ಮತ್ತು ಸ್ಥಳ

 1. 1989 ರಿಂದ 1993 ರವರೆಗೆ ಸಹಾಯಕ ಸಾರ್ವಜನಿಕ ಅಭಿಯೋಜಕರಾಗಿ ಹುಮನಬಾದ ಮತ್ತು ಇಂಡಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
 2. ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿಯಾಗಿ ಅಕ್ಟೋಬರ್‌ 1993 ರಿಂದ ಮೇ 2003 ರವರೆಗೆ ಹುಕ್ಕೇರಿ, ಅಥಣಿ, ಕುಷ್ಟಗಿ, ಕಲಬುರ್ಗಿ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
 3. ಮೇ 2003 ರಿಂದ ಮೇ 2006 ರವರೆಗೆ ರಾಣೇಬೆನ್ನೂರಿನ ನ್ಯಾಯಾಲಯದಲ್ಲಿ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 4. ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ ಮೇ 2006 ರಿಂದ ಜೂನ್‌ 2009 ರವರೆಗೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 5. ಕೌಟುಂಬಿಕ ನ್ಯಾಯಾಲಯ ಕಲಬುರ್ಗಿಯಲ್ಲಿ ಜುಲೈ 2009 ರಿಂದ ಮೇ 2010 ರವರೆಗೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 6. ಮೇ 2010 ರಿಂದ ಮೇ 2011 ರವರೆಗೆ ಕಾರ್ಮಿಕ ನ್ಯಾಯಾಲಯ, ಬಿಜಾಪುರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
 7. ಮೇ 2011 ರಿಂದ ನವೆಂಬರ್‌ 2013 ರವರೆಗೆ ಬಿಜಾಪುರದ I & II ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 8. ನವೆಂಬರ್‌ 2013 ರಿಂದ ಮೇ 2015 ರವರೆಗೆ ಕರ್ನಾಟಕ ಉಚ್ಚ ನ್ಯಾಯಾಲಯ, ಕಲಬುರ್ಗಿ ಪೀಠದ ಹೆಚ್ಚುವರಿ ಮಹಾ ನಿಬಂಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
 9. ಕೌಟುಂಬಿಕ ನ್ಯಾಯಾಲಯ, ಬೆಂಗಳೂರಿನ ಪ್ರಧಾನ ನ್ಯಾಯಾಧೀಶರಾಗಿ ಮೇ 2015 ರಿಂದ ಮೇ 2016 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ.
 10. ಮೇ 2016 ರಿಂದ ಮಾರ್ಚ್‌ 2017 ರವರೆಗೆ ಬೆಂಗಳೂರಿನ ನಗರ ಸಿವಿಲ್‌ ಕೋರ್ಟನಲ್ಲಿ ಸಿಬಿಐ ಪ್ರಕರಣಗಳ ನ್ಯಾಯಾಲಯಗಳ ಪ್ರಧಾನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 11. 27.03.2017 ರಿಂದ 31.05.2018 ರವರೆಗೆ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.
 12. ನಿವೃತ್ತಿಯ ನಂತರ ಬೆಂಗಳೂರಿನ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಕಾನೂನು ಸಲಹೆಗಾರರಾಗಿ ನೇಮಕಗೊಂಡು 05.10.2019 ರವರೆಗೆ ಕೆಲಸ ನಿರ್ವಹಿಸಿದ್ದಾರೆ.
 13. 09.10.2019 ರಂದು ಕರ್ನಾಟಕ ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.

 * * * * *

ಇತ್ತೀಚಿನ ನವೀಕರಣ​ : 31-07-2021 10:45 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾನೂನು ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080